ಗ್ರಾಮ ಪಂಚಾಯತ್ ನೇಮಕಾತಿ | Hassan Gram Panchayat Recruitment 2024

Hassan Gram Panchayat Recruitment 2024: ಹಾಸನ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿ ಇರುವ 12 ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳನ್ನು ನೇಮಕಾತಿ ಮಾಡಲು ತೀರ್ಮಾನಿಸಲಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಹಾಸನ ಜಿಲ್ಲೆಯ ವೆಬ್ ಸೈಟ್ ನಲ್ಲಿ hassan.nic.in ಆನ್ ಲೈನ್ ಮೂಲಕ ಭರ್ತಿ ಮಾಡಿ ಅಗತ್ಯ ದೃಢೀಕರಿಸಿದ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಮೊದಲು, ಇಲ್ಲಿ ನೀಡಿರುವ ಮಾಹಿತಿ ಮತ್ತು ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಈ ನೇಮಕಾತಿಗೆ ಸಂಬಂಧಿಸಿದಂತೆ ಉಪಯುಕ್ತವಾಗುವ ಎಲ್ಲಾ ಪ್ರಮುಖ ಲಿಂಕ್‌ಗಳನ್ನು ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ.

Hassan Gram Panchayat Recruitment 2024 ಹೆಚ್ಚಿನ ವಿವರ

  1. ಉದ್ಯೋಗ ಹೆಸರು: ಗ್ರಂಥಾಲಯ ಮೇಲ್ವಿಚಾರಕರು
  2. ಒಟ್ಟು ಹುದ್ದೆಗಳು: 12
  3. ಉದ್ಯೋಗದ ಸ್ಥಳ: ಹಾಸನ – ಕರ್ನಾಟಕ
  4. ಅನುಭವ: ಯಾವುದೇ ಅನುಭವ ಇಲ್ಲ
  5. ವೇತನ: ತಿಂಗಳಿಗೆ ₹15196.72/- ಮಾತ್ರ

ಶೈಕ್ಷಣಿಕ ವಿದ್ಯಾರ್ಹತೆ

  • ದ್ವಿತೀಯ ಪದವಿ ಪೂರ್ವ ಪರೀಕ್ಷೆ (ಪಿ.ಯು.ಸಿ)ಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಟ ಮೂರು ತಿಂಗಳ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಕೋರ್ಸ್ ನಲ್ಲಿ ಉತ್ತೀರ್ಣರಾಗಿರಬೇಕು.
  • ಒಂದು ವೇಳೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸದಿದ್ದಲ್ಲಿ ಪಿ.ಯು.ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಯು ಗಳಿಸಿದ ಅಂಕಗಳನ್ನು ಆಧರಿಸಿ ಅಧಿಸೂಚಿಸಿದ ಖಾಲಿ ಹುದ್ದೆಗಳಿಗೆ ಮೀಸಲಾತಿ ಬಿಂದುವಿನಂತೆ ಆಯ್ಕೆಗೆ ಪರಿಗಣಿಸಲಾಗುವುದು.
  • ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರಬೇಕು. ವಿದ್ಯಾರ್ಹತೆಯ ದಾಖಲಾತಿಗಳ ನೈಜತೆ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ದೃಢೀಕರಿಸಿಕೊಂಡು ನಂತರ ನೇಮಕಾತಿ ಆದೇಶ ನೀಡಲಾಗುವುದು.
  • ಒಂದು ವೇಳೆ ಇಬ್ಬರು ಅಥವಾ ಹಚ್ಚಿನ ಅಭ್ಯರ್ಥಿಗಳು ಸಮನವಾದ ಅಂಕಗಳನ್ನು ಮೆರಿಟ್ ಹೊಂದಿದ್ದು, ವಯಸ್ಸಿನ ಹಿರಿಯರಾದವರನ್ನು ಆಯ್ಕೆ ಮಾಡಲಾಗುವುದು. ಅದರಂತೆ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗುವುದು.
  • ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತತ್ಸಮಾನ ವಿದ್ಯಾರ್ಹತೆ ಹೊಂದಿದ್ದಲ್ಲಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ವಯೋಮಿತಿ

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಹಾಗೂ ಗರಿಷ್ಠ ವಯೋಮಿತಿಯು ಈ ಕೆಳಕಂಡಂತೆ ಇರತಕ್ಕದ್ದು.

  • ಸಾಮಾನ್ಯ ವರ್ಗ: 35 ವರ್ಷ
  • 2ಎ, 2ಬಿ, 3ಎ, 3ಬಿ : 38 ವರ್ಷ
  • ಪ.ಜಾ / ಪ.ಪಂ / ಪ್ರ-1: 40 ವರ್ಷ

ಅರ್ಜಿ ಶುಲ್ಕ

  • ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.500
  • ಪ್ರವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ: ರೂ.300
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ.200
  • ಎಲ್ಲಾ ವಿಧಗಳ ವಿಕಲಚೇತನ / ಅಂಗವಿಕಲ ಅಭ್ಯರ್ಥಿಗಳಿಗೆ: ರೂ.100

ಶುಲ್ಕ ಪಾವತಿ ವಿಧಗಳು

  1. ಡೆಬಿಟ್ ಕಾರ್ಡ್
  2. ಕ್ರೆಡಿಟ್ ಕಾರ್ಡ್
  3. ನೆಟ್ ಬ್ಯಾಂಕಿಂಗ್
  4. UPI

ವೇತನ

ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಿಗೆ ಪ್ರತಿ ಮಾಹೆ ಮಾಸಿಕ ಕನಿಷ್ಠ ವೇತನ ರೂ.15196.72/- ಹಾಗೂ ಕನಿಷ್ಠ ವೇತನ ಜೊತೆಗೆ ಕಾರ್ಮಿಕ ಇಲಾಖೆ ಕಾಲ ಕಾಲಕ್ಕೆ ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು (VDA) ಪಾವತಿಸಲಾಗುವುದು.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ದಿನಾಂಕ

  • ಅರ್ಜಿಗಳನ್ನು ಪ್ರಾರಂಭ ಮಾಡುವ ದಿನಾಂಕ:- 22-02-2024
  • ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:- 22-03-2024

ಪ್ರಮುಖ ಲಿಂಕ್ ಗಳು

Frequently Asked Questions (FAQs)

How to Apply for Hassan Gram Panchayat Recruitment 2024?

Visit the Official Website to hassan.nic.in Apply Online

What is the Online Application Last Date of Hassan Gram Panchayat Recruitment 2024?

22-03-2024

Leave a Comment